Sunday 6 September 2009

ನೀ..


ನೀನೆಂದರೆ-
ಹತ್ತರ ಹೊತ್ತಿನ ಖಡಕ್ ಚಾಯ್
ಇಲ್ಲದಿದ್ದರೆ ಕಿರಿಕಿರಿ
ಇದ್ದರೆ ತಣ್ಣಗಾಗುವ ಮುನ್ನ
ಎಲ್ಲ ಹೀರುವ ಬಯಕೆ


ನೀನೆಂದರೆ-
ಮಧ್ಯಾನ್ಹದ ಸುಖ ನಿದ್ದೆ
ಕಮ್ಮಿಯಾದರೆ ಕಾಡುವ ಕೊರತೆ
ಹೆಚ್ಚಾದರೆ ಮೀಟುವ ತಲೆನೋವು


ನೀನೆಂದರೆ-
ಮುಸ್ಸಂಜೆಯ ಸಿಡುಕು, ಮೌನ
ಮಾತಾದರೆ ಮುದ್ದು - ಇಲ್ಲದಿರೆ ಕಾವ್ಯ.


ಸೂಚನೆ: ಚಿತ್ರಗಳಲ್ಲಿ ಇದ್ದಿದ್ದು ನಮ್ಮನೆ ಟೇಬಲ್ಲನ್ನು ಹೊಸತಾಗಿ ಅಲಂಕರಿಸಿದ `Salt & Pepper Container'ಗಳು. ಬರೀ ಚಿತ್ರಗಳನ್ನು ಹಾಕುವುದೆಂತು? ಹಾಗಾಗಿ ಕೆಲ ಸಾಲುಗಳನ್ನೂ ಗೀಚಿದೆ :-)

16 comments:

ಶಾಂತಲಾ ಭಂಡಿ (ಸನ್ನಿಧಿ) said...

nija pooni, nanagU heegeyE EnO annisuttittu. neeneega bareda mEle annistide nanagU haageyE annisirabEku anta :-)
kannaDa type maaDale aagtaa ille. sorry.

LAxman said...

hi purnima , chennagide nimma chitra lekhan.

with regards
laxman

Anonymous said...

ನೀವು ಹೇಳಿದ ಮೇಲೆ ಗೊತ್ತಾಗಿದ್ದು ನೋಡ್ರಿ ಅವ್ನು ಹೀಗೆ ಅಂತ... ಅನ್ನಿಸಿದ್ದಕ್ಕೆ ಯಾರದ್ರೂ ಅಕ್ಷರ ರೂಪ ಕೊಟ್ರೆ ಏನು ಸಂತೋಷ ಆಗುತ್ತೆ ಅಲ್ವಾ...

Anonymous said...

Soooooper! erdua! :)

Ittigecement said...

ನೀನೆಂದರೆ...

ಮಧ್ಯರಾತ್ರಿಯ

ಮದ್ಯ...

ಬೇಕು ಬೇಕೆನಿಸುವಷ್ಟು...

ನಶೆಯಲ್ಲಿ

ಹೇಳಲಾಗದೆ ಒದ್ದಾಡುವ

ಗದ್ಯ ಭಾವದ ಪದ್ಯ....

ಚಂದದ ಕವನ...ಅಭಿನಂದನೆಗಳು...

ದೀಪಸ್ಮಿತಾ said...

ಎರಡೇ ವಸ್ತುಗಳನ್ನು ಬೇರೆ ಬೇರೆ ರೀತಿಯಲ್ಲಿ ಬಳಸಿ ಬೇರೆ ಬೇರೆ ಅರ್ಥ ಬರುವ ಹಾಗೆ ಚಿತ್ರಿಸಿದ್ದೀರಿ. ತುಂಬಾ ಚೆನ್ನಾಗಿದೆ.

Ranjita said...

poornimakkaaaa supeeeeeer .... nangu ondistu hinge baryana kanta iddu :P

Dileep Hegde said...

ಕವನ ಸೂಪರ್.. ಸಕತ್ ಇಷ್ಟವಾಯ್ತು....
ಹೌದು... ಈ pepper and salt container ಎಲ್ಲಿ ಸಿಗ್ತು..? It's realy cute...!

ASHRAF said...

ಹ ಹ ಹ ...ಪದಕ್ಕೆ ಪದ ಜೋಡಿಸಿ ಚೆಂದಾಗಿ ಕವನ ಬರೆದಿದ್ದೀರಾ ಅಭಿನಂದನೆಗಳು

ಸುಧೇಶ್ ಶೆಟ್ಟಿ said...

ಎಷ್ಟು ಕ್ರಿಯೇಟಿವ್ ಆಗಿ ಬರೆದಿದ್ದೀರಾ ಈ ಪದ್ಯವನ್ನು... ತು೦ಬಾನೇ ಇಷ್ಟವಾಯ್ತು...

ದಿನಕರ ಮೊಗೇರ said...

ಚಿತ್ರವೂ ಚೆನ್ನಾಗಿದೆ, ಕವನ ಇನ್ನೂ ಚೆನ್ನಾಗಿದೆ..... ಹೀಗೆ ಮನದ ಮನಸನ್ನು ಹರಿಯಲು ಬಿಡಿ.... ಒಳ್ಳೊಳ್ಳೆ ಕವನಗಳು ಬರುತ್ತವೆ....

ಗೌತಮ್ ಹೆಗಡೆ said...

:)

Anonymous said...

:)

jomon varghese said...

ವ್ಹಾ... ನೈಸ್...

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಶಾಂತಲಾ, ಲಕ್ಷ್ಮಣ್, ಮಿಂಚುಳ್ಳಿ (ಶಮಾ), ವೈಶಾಲಿ ದೀಪಸ್ಮಿತ - ಥಾಂಕ್ಸ್..! ಬರ್ತಾ ಇರಿ ಹೀಗೆ..
ಪ್ರಕಾಶಣ್ಣ - ಎಷ್ಟು ಚಂದದ ಹನಿ! ಥ್ಯಾಂಕ್ಯೂ.
ರಂಜಿತ - ತಡವೇಕೆ ಬಾಲೆ..ಬರೆಯುವಂಥವಳಾಗು :-)
ದಿಲೀಪ್ - ಇದು Norwich ಅನ್ನೋ ಪಟ್ಟಣದಲ್ಲಿ ಸಿಕ್ತು. ಬೇರೆ ಕಡೆ ನೋಡಿದ ಹಾಗಿಲ್ಲ ಇಂಥ cute containeರ್ಅನ್ನು :-)
ಅಶ್ರಫ್, ಸುಧೇಶ್, ದಿನಕರ್ - ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಮುಖ್ಯ :-)
ಗೌ’ತಮ’, ಕಲ್ಲರೆ ಮಹೇಶ್ - :) :) :)
ಜೋಮನ್ - ಥಾಂಕ್ಸ್‌ಸ್‌ಸ್‌ಸ್‌ :-)

Anonymous said...

ಚೆನ್ನಾಗಿದೆ ರೀ ಚಿತ್ರ ಲೇಖನ