ಇವನ ಬಗ್ಗೆ ಬರೆಯಬೇಕಂತೆ-
ಬರವಣಿಗೆ ಎಂದರೇನು ಅಮಟೆಕಾಯಿಯಾ
ಕಲ್ಲು ಹೊಡೆದ ಮರುಕ್ಷಣ ಮಡಿಲಲ್ಲಿ ಬೀಳಲು
ಎಂದರೆ,
ತಲೆ ಮೇಲೆ ನಕ್ಷತ್ರವನ್ನೇ ಉದುರಿಸುವಷ್ಟು
ರೊಮ್ಯಾಂಟಿಕ್ ಆಗಿ ಕಣ್ ಹೊಡೆಯುವ
ಇವನ ಬಗ್ಗೆ ಬರೆಯಬೇಕಂತೆ!
ಇವನಿಗಾಗಿ ಹಾಡಬೇಕಂತೆ-
ಹಾಡುವಾಗ ಸಾಲು ಮರೆತರೆ
ನೀ ಸಾಥ್ ಕೊಡುವೆಯಾ
ಎಂದರೆ,
ಕಣ್ಮಿಟುಕಿಸಿ, ಗಂಟಲು ಸರಿಮಾಡಿ
‘ಲವ್ಯೂ...’ ಎಂದೊದರುವ
ಇವನಿಗಾಗಿ ಹಾಡಬೇಕಂತೆ !
ಇವನಿಗಾಗಿ ಬದುಕಬೇಕಂತೆ-
ನನ್ಬದುಕೆಲ್ಲ ನೀನೇ ಅಲ್ಲವೇನೋ...
ಎಂದರೆ,
ಪುಟಾಣಿ ಮಡಿಲಲ್ಲಿ ಅಡಗುವ
ಮಾತೇ ಬರದಷ್ಟು ಭಾವುಕನಾಗುವ
ಇವನಿಲ್ಲದೇ
ಬದುಕು ಖುಷಿಯಾಗಿರುವುದಾದರೂ ಹೇಗೆ..?
9 comments:
ಗೆಳತಿ...
ಸೂಪರ್...
"ತಲೆ ಮೇಲೆ ನಕ್ಷತ್ರವನ್ನೇ ಉದುರಿಸುವಷ್ಟು
ರೊಮ್ಯಾಂಟಿಕ್ ಆಗಿ ಕಣ್ ಹೊಡೆಯುವ
ಇವನ ಬಗ್ಗೆ ಬರೆಯಬೇಕಂತೆ!"
ಹಿಂಗೇ ಎಲ್ಲ ಸಾಲೂ ಮಸ್ತ್....
ಹಂ..ಬರಿ, ಬರಿ...ಓದ್ತಾ ಇರ್ತಿ.
ಶಾಂತಲಾ,
ಥಾಂಕ್ಯೂ... :)
ನಮಸ್ತೇ ಪೂರ್ಣಿಮಾ,
ತೇಜಸ್ವಿನಿ ಹೆಗಡೆಯವರ ಬ್ಲಾಗ್ ಮೂಲಕ ಇಲ್ಲಿಗೆ ಬಂದೆ.
ಕವನ ಸೂಪರ್. ಒಂಥರಾ different approach ಚೆನ್ನಾಗನ್ನಿಸ್ತು.
ಆ ನಿಮ್ಮ ’ಅಜ್ಜಿ’ಗೆ ಬರೆದ ಕವನ ಕೂಡ ಇಷ್ಟವಾಯಿತು.
ಬರೀತಾ ಇರಿ.
-ವಿಕಾಸ್
ವಿಕಾಸ್,
ಥಾಂಕ್ಸ್ ರೀ...
ಹ್ಮ್, ಅಜ್ಜಿ.. ನಂಗೆ ಯಾವತ್ತೂ ಖುಶಿ-ಖುಶಿ ನೆನಪು ಕೊಡೋವ್ರು... :)
Hey poorni...super agi ide ee poem..sakkat maja banthu odii..good going poorni..hege baritariu..
super kavana:)
sogasaagidhe. heegirabekappaa kavana andhre. eshtu saleesaagi odhisikondu hoguththe.dhanyavaadhagalu. bareethaa iri.
hariharapurasridhar
ಪೂರ್ಣಿಮಾ ಮೇಡಮ್,
ತುಂಬಾ ಚೆನ್ನಾಗಿದೆ..ಕವನ...
ಮೊದಲು ಹುಸಿಕೋಪ...ಅದ್ರೆ ಒಳಗೆಲ್ಲೋ ಒಳಪ್ರೀತಿ...ಇದು ಚೆನ್ನಾಗಿ ಬಿಂಬಿತವಾಗಿದೆ...ಮತ್ತು ತುಂಬಾ ಸರಳವಾಗಿದೆ....
ಬರವಣಿಗೆ ಎಂದರೇನು ಅಮಟೆಕಾಯಿಯಾ
ಕಲ್ಲು ಹೊಡೆದ ಮರುಕ್ಷಣ ಮಡಿಲಲ್ಲಿ ಬೀಳಲು.....
ಈ ಸಾಲುಗಳು ಸಕ್ಕತ್ ಕ್ಯಾಚಿಯಾಗಿದೆ....ಅಹ.. ಅಹ...ಥ್ಯಾಂಕ್ಸ್.... ಹೀಗೆ ಬರೆಯುತ್ತಿರಿ....
ಚಂದ ಕವಿತೆ..
Post a Comment