Saturday 14 June 2008

ಬ್ರಿಟ್ ಬಿಟ್ಸ್

ಸೂ.ಪಿ
ನಮ್ಮಾಫೀಸಿನಲ್ಲೊಬ್ಬಳು ನಲವತ್ತರ ಸುಂದರಿ. ಹೆಸರು `Sue Power’. ಹದಿನಾಲ್ಕು ವರ್ಷಗಳಿಂದ ಸಿಖ್ ಒಬ್ಬನೊಡನೆ ’ಲಿವ್ ಇನ್’ ರಿಲೇಶನ್ ಅಂತೆ. ಅವನೆಸರು ‘ತರ್ಲೋಕ್’ (ತ್ರಿಲೋಕ್ ಇರಬಹುದು ಎಂಬುದು ನನ್ನ ಲೆಕ್ಕಚಾರ...). ಇವಳ ಬಾಯಲ್ಲಿ ಅವ ‘ಟಳಕ್’! ಮುಖ್ಯ ವಿಚಾರ ಅದಲ್ಲ. ಟಳಕ್ ತಂಗಿಯರಿಬ್ಬರು ಈ ಸುಂದರಿಯನ್ನ ‘ಸೂ.ಪಿ.’ ಅಂತ ಕರೀತಾರಂತೆ. ಏನು ಸೂ.ಪಿ ಅಂದ್ರೆ...? ಕೇಳಿದೆ. ‘ಸುರಿಂದರ್ ಪವರ್’ ಅಂತೆ!!!

ಮಗಳು ಬರ್ತಿದ್ದಾಳೆ
ಅಲೆನ್ ಹಾಲ್... ಐವತ್ತಾರಾದರೂ ಇಪ್ಪತ್ತೇ ಆದವರಷ್ಟು ಲವಲವಿಕೆ - ಜೀವನೋತ್ಸಾಹ. ನ್ಯೂಝೀಲ್ಯಂಡ್‌ಗೆ ಹೋದ ಮಗಳು ೨ ವರ್ಷದ ನಂತರ ಮತ್ತೆ ಮನೆಗೆ ಬರುವ ಸಂಭ್ರಮ ಇವನಿಗೆ. ಒಂದು ದಿನ ಮಗಳಿಗಾಗಿ ಹೊಸ ಬೆಡ್, ಮರುದಿನ ಮಗಳ ಕೋಣೆಗೆ ಹೊಸ ಕರ್ಟನ್, ಮಗಳಿಗಿಷ್ಟವಾಗುವ ಸೀಡಿ - ಬುಕ್‌ಗಾಗಿ ವೀಕೆಂಡ್‌ ಶಾಪಿಂಗ್. ಇವನ ಸಡಗರ ಕಂಡು ಒಂದಿನ ಕೇಳಿದೆ. ‘ಡು ಯೂ ರಿಯಲಿ ಮಿಸ್ ಯುವರ್ ಡಾಟರ್ ವೆನ್ ಶಿ ಇಸ್ ಇನ್ ನ್ಯೂಝೀಲ್ಯಾಂಡ್...?’ ಸ್ವಲ್ಪ ಹೊತ್ತು ಸುಮ್ಮನಾದ. ನಂತರ ನಿಧಾನ ಹೊರಟಿತು ಮಾತು. ‘ಐ ಕೆನಾಟ್ ಸೇ ವಿ ಡು ನಾಟ್ ಮಿಸ್ ಹರ್... ಬಟ್ ಕ್ಯಾನ್ ಡೆಫಿನಿಟ್ಲೀ ಸೇ, ವಿ ಡೋಂಟ್ ವಾಂಟ್ ದಟ್ ಡೇ - ವೆನ್ ಶಿ ಹೆಡ್ಸ್ ಟುವಾರ್ಡ್ಸ್ ಏರ್‌‌ಪೋರ್ಟ್’.

‘ಹೋಗಿ ಬರುತ್ತೇನೆ’ ಎನ್ನುವ ಸಮಯಕ್ಕೆ ಸರಿಯಾಗಿಯೇ ತೋಟದತ್ತ ಧಾವಿಸುವ ಅಪ್ಪಯ್ಯ ಅವತ್ತು ಇಡೀ ದಿನ ನೆನಪಾದ. ರಾತ್ರಿ ಕನಸಲ್ಲಿ ಬೆಂಗ್ಳೂರು ಬಸ್ ಹತ್ತಿಸಿ ಕೈ ಬೀಸುತ್ತಿರುವ ಅಣ್ಣ.

8 comments:

ಶಾಂತಲಾ ಭಂಡಿ (ಸನ್ನಿಧಿ) said...

ಗೆಳತಿ...
ಬೀಳ್ಕೊಡುಗೆಯ ಬಿಕೋ ಭಾವಗಳು...
ಬರಿದಾದ ಬನದಲ್ಲಿ ಬರಿಮೌನದಂತೆ.
ಬರೀತಿರು...
ಬರುತ್ತಿರುವೆ ಭಾವಗಳ ಬಾಚಲು.

Sushrutha Dodderi said...

dayaviTTu nimma blogina RSS feed enable maaDi..

jomon varghese said...

ನವಿರು ಭಾವನೆಯ ಬರಹ. ಬರೆಯುತ್ತಿರಿ.

ಸುಧೇಶ್ ಶೆಟ್ಟಿ said...

ಬದುಕಿನಾದ್ಯ೦ತ ಕಾಪಿಡಬೇಕಾದ ಅಮೂಲ್ಯ ಕ್ಷಣಗಳು ಅವು.

ಬದುಕಿನ ಎರಡು ವೈರುಧ್ಯಗಳನ್ನು ತೋರಿಸಿದ್ದೀರಿ ನಿಮ್ಮ ಬರಹದಲ್ಲಿ.

ವಿ.ರಾ.ಹೆ. said...

ನಂಗೆ ಹೆಡ್ಡಿಂಗೇ ಅರ್ತಾಜಿಲ್ಲೆ. ಸ್ವಲ್ಪ ಹೆಡ್ಡ ನಾನು , ಎಂತು ಹಂಗಂದ್ರೆ?

ಪೂರ್ಣಿಮಾ ಭಟ್ಟ, ಸಣ್ಣಕೇರಿ said...
This comment has been removed by the author.
ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಶಾಂತಲಾ, ಸುಶ್ (ಸಲಹೆಗೆ), ಜೋಮನ್, ಸುಧೇಶ್ - ಥ್ಯಾಂಕ್ಸ್!

@ ವಿಕಾಸ್
ನೀನೆಂಥಾ ಹೆಡ್ಡನಾ..? ಅಷ್ಟು ಚೊಲೋ ಮಾಡಿ ಬ್ಲಾಗ್ maintain ಮಾಡ್ತೆ!!! :)
Brit = 'British'ಗೆ ಶಾರ್ಟ್ ಫಾರ್ಮ್
Bits = ತುಣುಕುಗಳು.
ಬ್ರಿಟಿಷ್ ನಾಡಲ್ಲಿ ಆದ ತುಂಡು- ತುಂಡು ಅನುಭವಕ್ಕೆ ಹಿಂಗೆ ಹೆಸ್ರು ಕೊಟ್ಟಿ, ಅಷ್ಟೇ.

27 August 2008 13:27

shivu.k said...

ಪೂರ್ಣಿಮಾ ಮೇಡಮ್,

ಈ ಪುಟ್ಟ ಲೇಖನಗಳನ್ನು ಓದಿದರೆ ವಸುದೇಂದ್ರರ ನಮ್ಮಮ್ಮ ಅಂದ್ರೆ ನಂಗಿಷ್ಟದಲ್ಲಿ ಪುಸ್ತಕದಲ್ಲಿ ಅವರ ಆಫೀಸಾಯಣ ನೆನಪಾಯಿತು....ಬರಹ ಇಷ್ಟವಾಗುತ್ತದೆ....ಹೀಗೆ ಬರೆಯುತ್ತಿರಿ.....ಥ್ಯಾಂಕ್ಸ್...