Thursday 19 June 2008

ಸಾಕಿನ್ನು ಮರುಗಿದ್ದು

ತುಸು ಕಸಿವಿಸಿ
ಇಲ್ಲೇ ಎಲ್ಲೋ
ಮೂಲೆಯಲ್ಲಿ
ಮನಸೇ ಇರಬೇಕು
ಅಲ್ಲವಾದರೆ ಹೆಜ್ಜೆಯೇಕೆ
ತತ್ತರಿಸೀತು?

ಅದೋ, ಅವ ಹೇಳುತ್ತಿದ್ದಾನೆ
ದಿನದ ನಗುವಿಲ್ಲ
ಮುಖದಲ್ಲಿ
ಅಂಗಿ ಹಾಕಿದ್ದು
ತಿರುವುಮುರುವಂತೆ
ಅವಳು ಉಸುರಿದಳು
ಕಿವಿಯಲ್ಲಿ
ಅರೇ, ಇದು ಚಿತ್ತ ಸ್ವಾಸ್ಥ್ಯದ ಪ್ರಶ್ನೆಯೇ?
ಸುಮ್ಮನೇ ತಳಮಳ...

ನಡೆದದ್ದು ಅವರ
ಮೂಗಿನ ನೇರ ದಾರಿ ಹಿಡಿದೇ.
ಹಾಗಾದರೆ ತಪ್ಪಾಗಿದ್ದೆಲ್ಲಿ?
ಕೊನೆಗೂ ಮರೆತಿದ್ದು
ಮನೆಯ ಹಾದಿ!

ಕಣ್ಣ ಸುತ್ತಲಿನ ಕಪ್ಪು
ವರ್ತುಲ ಕಾಯುತ್ತಿರುವುದು
ನಿನ್ನ ಅಪ್ಪುಗೆಗಲ್ಲವೇ?
ತುಟಿಯ ಪಕ್ಕದ
ಮಚ್ಚೆಗೆ ಬೇಕಿರುವುದು
ಬೆಚ್ಚನೆಯ ನೇವರಿಕೆ ಅಲ್ಲವೇ?

13 comments:

ಶಾಂತಲಾ ಭಂಡಿ (ಸನ್ನಿಧಿ) said...

ಪೂರ್ಣಿಮಾ...

"ನಡೆದದ್ದು ಅವರ
ಮೂಗಿನ ನೇರ ದಾರಿ ಹಿಡಿದೇ.
ಹಾಗಾದರೆ ತಪ್ಪಾಗಿದ್ದೆಲ್ಲಿ?
ಕೊನೆಗೂ ಮರೆತಿದ್ದು
ಮನೆಯ ಹಾದಿ!"

ಎಂತಹ ಸಾಲಿದು! ಹಿಡಿದಿಟ್ಟ ಸಾಲಿದು.


"ಕಣ್ಣ ಸುತ್ತಲಿನ ಕಪ್ಪು
ವರ್ತುಲ ಕಾಯುತ್ತಿರುವುದು
ನಿನ್ನ ಅಪ್ಪುಗೆಗಲ್ಲವೇ?
ತುಟಿಯ ಪಕ್ಕದ
ಮಚ್ಚೆಗೆ ಬೇಕಿರುವುದು
ಬೆಚ್ಚನೆಯ ನೇವರಿಕೆ ಅಲ್ಲವೇ?"
ಯಾಕೋ ಇರುಸುಮುರುಸಾಯ್ತು :).

ಚೆನ್ನಾಗಿವೆ ಎಲ್ಲ ಸಾಲುಗಳು.

Anonymous said...

BLOG CHENDA IDDU.ADDI ILLE NIVU CHENNAGI BRITIRI. KEEP IT UP.
KUNTINI

ವಿನಾಯಕ ಭಟ್ಟ said...

ಸಣ್ಣ ಕೇರಿಯಿಂದ ಇಗ್ಲೆಂಡಿನ ದೊಡ್ಡ ಕೇರಿಗೆ ಹೋದ ಕೂಸೆ ನಿನ್ನ ಬ್ಲಾಗು ಇದ್ದು ಹೇಳಿ ಹೇಳಿದ್ದೇ ಇಲ್ಲೆ. ನಾನೇ ಹುಡುಕಿ ಬಂದೆ. ಭಾರೀ ಕವನ ಎಲ್ಲಾ ಬರದ್ದೆ ಮಾರಾಯ್ತಿ. ಚೆನ್ನಾಗಿದ್ದು. ಪತ್ನಿಕೋದ್ಯಮದಲ್ಲಿ ತೊಡಗಿಕೊಂಡ ಮೇಲೂ ಪತ್ರಿಕೋದ್ಯಮದ (ಬರವಣೀಗೆಯ) ಬಗ್ಗೆ ಆಸಕ್ತಿ ಇರಿಸಿಕೊಂಡಿದ್ದಕ್ಕೆ ಶಭಾಸ್...

ಕಾರ್ತಿಕ್ ಪರಾಡ್ಕರ್ said...

ಚಂದದ ಸಾಲುಗಳು. ಬ್ಲಾಗಿನ ಹೆಸರಂತೂ ಆಪ್ತವಾಗಿದೆ.

ಸುಧೇಶ್ ಶೆಟ್ಟಿ said...

ಚ೦ದ ಚ೦ದ ಸಾಲುಗಳು ಮನಸೆಳೆಯಿತು.

- ಸುಧೇಶ್

jomon varghese said...

ಚೆಂದದ ಕವಿತೆ ..

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

* ಶಾಂತಲಾ,
ಥಾಂಕ್ಯೂ... ಛೆ, ಇರುಸುಮುರುಸು ಯಾಕೆ..?

* ಕಣ್ ಹಾಯಿಸಿದ್ದಕ್ಕೆ ಧನ್ಯವಾದಗಳು ಕುಂಟಿನಿ :)

* ವಿನಾಯಕ,
ಇಂಥ ಶಭಾಸ್ಗಿರಿ ಬೇಕಿತ್ತು ಭಟ್ರೇ. ನೀವೆಲ್ಲ ಬೆನ್ನು ತಟ್ಟಿದ್ರೆ ಪತ್ನಿಕೋದ್ಯಮ - ಪತ್ರಿಕೋದ್ಯಮ ಎರಡೂ ನಿಭಾಯಿಸಬಲ್ಲೆ!

* ಕಾರ್ತೀಕ್, ಬ್ಲಾಗ್ ಗೆ ಸ್ವಾಗತ. ಹೊಗಳಿಕೆಗೆ ಧನ್ಯವಾದ.:)

* ಸುಧೇಶ್ ಥಾಂಕ್ಸ್ ಕಣ್ರೀ..

* ಅರೇ, ನೀವೂ ಬಂದ್ರಾ ಜೋಮನ್!! ಹೀಗೇ ಬರ್ತಾ ಇದ್ರೆ ಖುಷಿ ಆಗತ್ತೆ :)

Unknown said...

Nice poem :)

ಹರಿಹರಪುರ ಶ್ರೀಧರ್ said...

ಕೊನೆಗೂ ಮರೆತಿದ್ದು
ಮನೆಯ ಹಾದಿ!

thumbaa hidisuthu ree.
congradulations
Hariharapurasridhar

shivu.k said...

ಸೊಗಸಾದ ಕವನ. ನಿಮ್ಮ ಬ್ಲಾಗ್ ಚೆನ್ನಾಗಿದೆ. ಬರುತ್ತಿರುತ್ತೇನೆ.

ನಾನು ಶಿವು. ಛಾಯಾಗ್ರಾಹಕ ನೀವೊಮ್ಮೆ ನನ್ನ ಬ್ಲಾಗಿಗೆ ಬಂದರೆ ಅಲ್ಲಿ ನಿಮಗೆಷ್ಟವಾಗುವ ಫೋಟೊ ಮತ್ತು ಲೇಖನಗಳು ಸಿಗಬಹುದು.

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

Kavita, Hariharapurashridhar & Shivu..
Thanks verymuch... :)

shivu.k said...

ಪೂರ್ಣಿಮಾ ಮೇಡಮ್,

ನಡೆದದ್ದು ಅವರ
ಮೂಗಿನ ನೇರ ದಾರಿ ಹಿಡಿದೇ.
ಹಾಗಾದರೆ ತಪ್ಪಾಗಿದ್ದೆಲ್ಲಿ?
ಕೊನೆಗೂ ಮರೆತಿದ್ದು
ಮನೆಯ ಹಾದಿ!"

ಸಾಲುಗಳು ನನಗಿಷ್ಟವಾಯಿತು.......

ನಿಮ್ಮ ಬರವಣಿಗೆಗೆ ತಕ್ಕ ಹಾಗೆ ನಿಮ್ಮ ಬ್ಲಾಗಿನ ಹೆಸರು ಸೂಕ್ತವಾಗಿದೆ......ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳಬೇಕೆನಿಸಿದೆ.....

kaligananath gudadur said...

ಕಣ್ಣ ಸುತ್ತಲಿನ ಕಪ್ಪು
ವರ್ತುಲ ಕಾಯುತ್ತಿರುವುದು
ನಿನ್ನ ಅಪ್ಪುಗೆಗಲ್ಲವೇ?
ತುಟಿಯ ಪಕ್ಕದ
ಮಚ್ಚೆಗೆ ಬೇಕಿರುವುದು
ಬೆಚ್ಚನೆಯ ನೇವರಿಕೆ ಅಲ್ಲವೇ?
Adestu aapta saalugalannu barediddiri. Chennagide Kavana.