Friday, 12 February 2010

ಸಂತೆಯಿದು - ಸೆಟೆದು ನಿಲ್ಲದಿರು!

ಶಿದ್ದೆ ಒದ್ದು ಒಳ ಬಂದ ದಿನದಿಂದ
ಸಾವಿರ ಕನಸು, ನೂರಿನ್ನೂರು ಮುನಿಸು
ನಡುವೊಂದಿಷ್ಟು ಪ್ರೀತಿ - ಪ್ರೇಮ - ಸಾಕ್ಷಾತ್ಕಾರ
ಅದಕು ಮೊದಲಿನದೆಲ್ಲ ಹಾದರಕೆ ಸಮವಂತೆ
ನಾನು ನೀನೆಂದಿದ್ದು ಮನೆಮುರುಕ ಮಾತಂತೆ

ಮದುವೆ ಮಂಟಪದಲ್ಲಿ ಪಾದ
ತೊಳೆಯುವುದಿಲ್ಲ ಕಾಲಿಗೆ ಬಿದ್ದರೂ
ನನ್ನ ಆಳುವ ಗಂಡೆಂಬ ಭಾವದಲ್ಲಲ್ಲ
ಹಿರಿ - ಕಿರಿಯರ ಸಂಸ್ಕಾರ ಅವರೇ ತಿದ್ದಿಸಿದ್ದು
ಮರೆಯುವಂತಿಲ್ಲವಲ್ಲ?

ರೂಮಿನ ಆಚೆ ಕಾಲಿಡುವ ಮೊದಲು
ಏಕವಚನವೆಲ್ಲ ‘ಬಹು’ವಾಗಲಿ
ಏರಿದ ದನಿ ತುಸು ತಗ್ಗಲಿ
ಮಗಳೇ, ಫೆಮಿನಿಸಮ್ಮಿನ ಗುಮ್ಮ
ನಮ್ಮ ಹೆದರಿಸದು ಬಿಡು
ಪಕ್ಕದ ಮನೆ ಅತ್ತಿಗೆಯ ಮೈದುನನ ಸೋದರತ್ತೆಯ
ಬಾಯಿಗೆ ಆಹಾರವಾಗುವುದೆಷ್ಟು ಸಮ?

ಸಂಸಾರವೆಂದರೆ ಸುತ್ತಾಟ, ನಗು, ಹರಟೆ
ಹಣ, ಸುಖದ ಸೂರೆ ಮಾತ್ರವ?
ಈಗೀಗ ಮನೆಯ ಸುತ್ತಲ
ಬೇಲಿಗೂಟಕ್ಕೂ ಅನುಮಾನವಂತೆ.
ಇಗೋ ಇಲ್ಲಿದೆ ನನ್ನ ಷರಾ -
ಇನ್ಯಾವ ಅಂಗಡಿಯಲಿ ಹುಡುಕಲಿ
ಆಡುವ ಬಾಯಿಗೆ ಜಡಿಯುವ ಬೀಗವ?

14 comments:

ಸಾಗರದಾಚೆಯ ಇಂಚರ said...

ಪೂರ್ಣಿಮಾ,
ಅರ್ಥಪೂರ್ಣ ಕವನ
ಬದುಕು ಹಾರುವ ಹಕ್ಕಿಯಂತೆ
ಸ್ವಚ್ಚಂದವಾಗಿ ಹಾರುತಿರಬೇಕು
ಬದುಕಿನಲಿ ಗೌರವ ಇರಬೇಕು ಹಿರಿ ಕಿರಿಯರಲಿ
ಆದರೆ ಗೌರವವೇ ಬದುಕಿನ ಸರ್ವಸ್ವವನ್ನೂ ತಿನ್ನಬಾರದು
ನಿಮ್ಮ ಕವನದ ಸಾಲುಗಳು ಬಹಳ ಹಿಡಿಸಿದವು

shivu.k said...

ಫೂರ್ಣಿಮ ಮೇಡಮ್,

ತುಂಬಾ ದಿನಗಳ ನಂತರ ಒಂದು ಸುಂದರ ಕವನ. ಬದುಕಿನ, ಸಂಸಾರದ ಬಗ್ಗೆ ಚೆನ್ನಾಗಿ ಬರೆದಿದ್ದೀರಿ.

ಸುಧೇಶ್ ಶೆಟ್ಟಿ said...

ತು೦ಬಾ ಚೆನ್ನಾಗಿದೆ ಕವನ.....

- ಸುಧೇಶ್

maddy said...

ಬಹಳ ಸೊಗಸಾಗಿದೆ..ನಿಮ್ಮ ಕವನ..

ಚಿತ್ರಾ said...

ಪೂರ್ಣಿಮಾ
ಚಂದದ, ಅರ್ಥಗರ್ಭಿತ ಕವನ ! ಓದಿ ಖುಷಿಯಾತು .
" ಸಂಸಾರವೆಂದರೆ ಸುತ್ತಾಟ, ನಗು, ಹರಟೆ ಹಣ, ಸುಖದ ಸೂರೆ ಮಾತ್ರವ? " ಇಲ್ಲ , ಅದಲ್ಲದೆ ಇನ್ನೂ ಬೇಕಷ್ಟಿದೆ ಅಲ್ಲವೇ?

SANTA said...

aaduva baayige jadiyuva beega bahushaha innoo Aligarh nalloo tayaraagiralikkilla! Adanneke hudukuvadu?
Ella Isam galoo onthara gummagale! kaala kaledante avugalige dham kadime aaguttade date baar ada vastugalante!
Ottinalli baduku sahyavaagirbeku....sahaneeyavaagabeku....adakke namma namma manasugalalle madduntu! santeyalli setedunilluvadakkinta summaniddu aalisuva,gamanisuva santanaaguvadaralli sukhda nerlunteno bahusha!
Kavana chennagide

ಮನಮುಕ್ತಾ said...

ನಿಮ್ಮ ಬ್ಲಾಗಿಗೆ ನನ್ನ ಮೊದಲ ಬೇಟಿ..ಶಾ೦ತಲ ಅವರ ಬ್ಲಾಗಿನಿ೦ದ ನಿಮ್ಮ ಬ್ಲಾಗಿಗೆ ಬ೦ದೆ.

ಕೆಲವೊಮ್ಮೆ ಮೌನ, ಕೆಲವೊಮ್ಮೆ ಮುಗುಳು, ಕೆಲವೊಮ್ಮೆ ಮಾತು, ಆಡುವವರ ಬಾಯಿಗೆ ಬೀಗವಾಗಬಹುದು!ಅನುಮಾನಕ್ಕೆ ಮಾತ್ರ ಔಷಧಿ ಇಲ್ಲ ಅನಿಸುತ್ತದೆ. ಅವರವರ ತಲೆಯಲ್ಲಿ ಇರುವ ಅನುಮಾನದ ಹುಳುವಿಗೆ ಆಹಾರ ಸಿಗದಾಗ ಅಲ್ಲೇ ಸತ್ತು ಹೋಗಬಹುದು.
ಕವನ ಚೆನ್ನಾಗಿದೆ.

Ittigecement said...

ಪೂರ್ಣಿಮಾ..

ಬಹಳ ಸೊಗಸಾದ ಕವನ...

ದಾಂಪತ್ಯದಲ್ಲಿ...
ಅಪಥ್ಯವಾದರೂ...
ಕೆಲವೊಂದಿಷ್ಟು..
ಹಿರಿಯರು ಕೊಟ್ಟ ಸಂಪ್ರದಾಯದಲ್ಲಿ ಹೋಗುವ ಅನಿವಾರ್ಯತೆ ಇದೆ...
ಮನಸ್ಸಿಗೆ ಇಷ್ಟವಾಗದಿದ್ದರೂ..ಸಹ..!

ಚಂದದ ಸಾಲುಗಳಿಗೆ ಅಭಿನಂದನೆಗಳು...

Raghu said...

ಸುಂದರ ಕವನ.. ಹೀಗೆ ಬರೆಯುತ್ತ ಇರಿ...
ನಿಮ್ಮವ,
ರಾಘು.

shankar said...

ಮೌನ ಮುಗುಳು ಮಾತಿನ ಕತೆ, ಕವನ ಓದಿದೆ. ಚೆನ್ನಾಗಿದೆ. ಸಾಗರದಾಚೆಯ ಇಂಚರ ಚೊಲೋ ಐತಿ... ಭಾಳ ಖುಷಿ ಆತು... ಹಿಂಗ ಬರಕೋಂತ ಹೋಗು ಕಡಲಾಚೆಯ ಕವಯಿತ್ರಿ ಆಗ್ತಿ..

ಶಂಕರ

ಚುಕ್ಕಿಚಿತ್ತಾರ said...

nice poem..
houdalve....! ???

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

@ ಸಾಗರದಾಚೆ ಇಂಚರ, ಶಿವೂ, ಸುಧೇಶ್, maddy - ಕವಿತೆ ಮೆಚ್ಚಿಕೊಂಡಿದ್ದಕ್ಕೆ ಥಾಂಕ್ಸ್!!!
@ ಚಿತ್ರಕ್ಕ, ಹ್ಮ್ ಹೌದೇ ಹೌದು - ಅದು ಬಿಟ್ಟು ಇನ್ನೂ ಎಷ್ಟೆಲ್ಲ ಇದ್ದು... :-)
@ ವಸಂತ್ ಸರ್, ನೀವು ಹೇಳಿದ್ದೂ ಹೌದು- ಆದರೆ ಎಲ್ಲ ಸಮಯದಲ್ಲೂ ಶಾಂತ - ಸಂತನಾಗಿರಲು ಈ ಮನಸ್ಸು ಬಿಡಬೇಕಲ್ಲ!
@ ಮನಮುಕ್ತಾ, ನನ್ನ ಬ್ಲಾಗ್‌‍ಗೆ ನಿಮಗೆ ವಾರ್ಮ್ ವೆಲ್ಕಮ್ಮು :-)
@ ಪ್ರಕಾಶಣ್ಣ, ರಾಘು - ಕವಿತೆ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್!
@ ಶಂಕ್ರು - ನೀ ನನ್ನ ಬ್ಲಾಗ್ ಓದಿದ್ದು ಖುಷಿಯ ವಿಚಾರ. ಭೇಟಿ ಕೊಡ್ತಾ ಇರು ಹೀಂಗೆ!
@ ಚುಕ್ಕಿ ಚಿತ್ತಾರ, ಹ್ಮ್- ಹೌದಪ್ಪಾ ಹೌದು :-)

Pavan Kumar said...

ಎಲೆಲ್ಲಿ ಕನ್ನಡದ ಕಂಪು ಸೊಸಲು ಅಲ್ಲಲ್ಲಿ ಕರಣ ಚಾಚೇವು

ಮೌನಿಯಾಗು ನೀ ........... said...

HAGE MOUNA VENDU HUDUKIDAGA NEMMA BLOG SEKTHU TUMBA CHENNAGEDE..........NEMMA BARAVANIGEYALLI VASTAVDA SWARAVIDE